• Sun. Apr 28th, 2024

ನಮ್ಮ ಕೋಲಾರ

  • Home
  • ಗುಡಿಸಲುಗಳನ್ನು ದ್ವಂಸ ಮಾಡಲು ಮುಂದಾಗಿರುವುದು ಖಂಡನೀಯ:ವೆಂಕಟೇಶ್.

ಗುಡಿಸಲುಗಳನ್ನು ದ್ವಂಸ ಮಾಡಲು ಮುಂದಾಗಿರುವುದು ಖಂಡನೀಯ:ವೆಂಕಟೇಶ್.

ಬಂಗಾರಪೇಟೆ:ನಿವೇಶನ ರಹಿತರು ನಿರ್ಮಿಸಿಕೊಂಡಿರುವ ಗುಡಿಸಲುಗಳನ್ನು ರಾಜಕೀಯ ದುರುದ್ದೇಶದಿಂದ ಹುಲಿಬೆಲೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಪತಿ ಹಾಗೂ ಅವರ ಕೆಲವು ಬೆಂಬಲಿಗರು ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಿ ತಾತ್ಕಾಲಿಕವಾಗಿ ನಿರ್ಮಿಸಿರುವ ಗುಡಿಸಲುಗಳನ್ನು ಜೆಸಿಬಿ ಮೂಲಕ ದ್ವಂಸ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಕರ್ನಾಟಕ…

ನಾಡಪ್ರಭು ಕೆಂಪೇಗೌಡ ದೂರ ದೃಷ್ಟಿಯ ಚಿಂತಕ:ಎಸ್ ಎನ್. ನಾರಾಯಣಸ್ವಾಮಿ.

ಬಂಗಾರಪೇಟೆ:ನಾಡಪ್ರಭು ಕೆಂಪೇಗೌಡರವರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜನಾಗಿದ್ದು ದೂರ ದೃಷ್ಟಿಯ ಚಿಂತಕರಾಗಿದ್ದರು. ಬೆಂಗಳೂರನ್ನು ಕಟ್ಟಿ ಬೆಳೆಸಿದ ಅತ್ಯಂತ ಧೈರ್ಯವಂತ ಜೊತೆಗೆ  ನಾಡನ್ನು ಕಟ್ಟಿ ವಿಶ್ವ ಇತಿಹಾಸ ಪುಟದಲ್ಲಿ ಅಜರಾಮರರಾಗಿದ್ದಾರೆ ಎಂದು ಶಾಸಕ ಎಸ್.ಎನ್.ನರಾಯಣಸ್ವಾಮಿ ಅಭಿಪ್ರಾಯಪಟ್ಟರು. ಅವರು ಪಟ್ಟಣದ ಕೋಲಾರ ರಸ್ತೆಯ ಕೆಂಪೇಗೌಡ…

ಹಿಂದಿನ ಸರ್ಕಾರಗಳ 4 ಪ್ರಮುಖ ಹಗರಣಗಳ ಸೂಕ್ತ ತನಿಖೆ ನಡೆಸಲಾಗುವುದು:ಸಿದ್ದರಾಮಯ್ಯ.

ಬೆಂಗಳೂರು:ಹಿಂದಿನ ಸರ್ಕಾರಗಳ ಪ್ರಮುಖ 4 ಹಗರಣಗಳಾದ ವೈದ್ಯಕೀಯ ಕಾಲೇಜು ನಿರ್ಮಾಣದಲ್ಲಿ ಅವ್ಯವಹಾರ, 40% ಕಮಿಷನ್, ಕರೋನಾ ಸಂದರ್ಭದಲ್ಲಿ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿನ ಅವ್ಯವಹಾರ, ನೀರಾವರಿ ಕಾಮಗಾರಿಗಳಲ್ಲಿ ಅವ್ಯವಹಾರ, ಪಿಎಸ್ಐ ನೇಮಕಾತಿ ಹಗರಣ ಹಾಗೂ ಬಿಟ್ ಕಾಯಿನ್ ಹಗರಣಗಳ ಬಗ್ಗೆ ಸೂಕ್ತ ತನಿಖೆ…

ತಾಯಿ ಸಾವಿನ ಬಗ್ಗೆ ಮಕ್ಕಳಿಗೆ ಅನುಮಾನ:ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ.

ಶ್ರೀನಿವಾಸಪುರ:ತಾಯಿ ಸಾವಿನ ಬಗ್ಗೆ ಮಕ್ಕಳಿಗೆ ಅನುಮಾನವಿದ್ದ ಕಾರಣ ತಾಲ್ಲೂಕಿನ ಆರ್ ರೆಡ್ಡಿವಾರಪಲ್ಲಿ ಗ್ರಾಮದಲ್ಲಿ 13 ದಿನಗಳ ಹಿಂದೆ ಮಣ್ಣು ಮಾಡಿದ್ದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ನಡೆದಿದೆ. ಕಳೆ 13 ದಿನಗಳ ಹಿಂದೆ ಮೃತ ಪಟ್ಟಿದ್ದ ಲಕ್ಷ್ಮಿದೇವಮ್ಮ (50)ರನ್ನು…

ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಿಕೆಗಳ ಸಂಪಾದಕರ ಸಂಘಕ್ಕೆ ಅಧ್ಯಕ್ಷರಾಗಿ ಮುರಳೀಧರ್, ಪ್ರಧಾನ ಕಾರ್ಯದರ್ಶಿ ಸದಾನಂದ್ ಆಯ್ಕೆ

ಕೋಲಾರ ಜಿಲ್ಲಾ ಪತ್ರಿಕೆಗಳ ಸಂಪಾದಕರನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಇಂದು ದಿಟ್ಟಹೆಜ್ಜೆಯನ್ನಿಟ್ಟಿರುವ ಅವಿಭಜಿತ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಂಪಾದಕರು ತಮ್ಮ ಸಂಘಕ್ಕೆ ಅಧ್ಯಕ್ಷರನ್ನಾಗಿ ಕೋಲಾರ ಧ್ವನಿ ಪತ್ರಿಕೆ ಸಂಪಾದಕ ಹೆಚ್.ಎನ್. ಮುರಳೀಧರ್, ಪ್ರಧಾನ ಕಾರ್ಯದರ್ಶಿಯಾಗಿ ಉದಯ ಮಿತ್ರ ಪತ್ರಿಕೆ ಸಂಪಾದಕ ಎ.…

ಕೋಲಾರ ಜಿಲ್ಲೆಗೆ ವಿದರ್ಭ ಪ್ಯಾಕೇಜ್ ಘೋಷಣೆಗೆ ರೈತಸಂಘ ಆಗ್ರಹ ಪ್ರತಿಭಟನೆ-ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ವಿದರ್ಭ ಪ್ಯಾಕೇಜ್ ಘೊಷಣೆ ಮಾಡಬೇಕೆಂದು ಆಗ್ರಹಿಸಿ ಸೋಮವಾರ ರೈತ ಸಂಘದಿಂದ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ,ನಾರಾಯಣಗೌಡ ಮನವಿ ಸಲ್ಲಿಸಿ ಮಾತನಾಡಿ, ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ…

ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸ್ ದಾಳಿ:ಕೆಲವರ ಬಂಧನ.

ಮುಳಬಾಗಿಲು:ತಾಲ್ಲೂಕಿನ ಬೈರಕೂರು ಹೋಬಳಿ ಹೆಚ್.ಬೈಯಪ್ಪನಹಳ್ಳಿ ಬಳಿ ಇರುವ ರಾಕ್ ವ್ಯಾಲಿ ರೆಸಾರ್ಟ್ ಆವರಣದಲ್ಲಿನ ರಾಕ್ ವ್ಯಾಲಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ  ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ ಕೆಲವರನ್ನು ಬಂಧಿಸಿದ್ದಾರೆ. ಈ ಕುರಿತು ಕೋಲಾರ ಜಿಲ್ಲಾ ಎಸ್.ಪಿ…

ತಾಕತ್ತಿದ್ದರೆ ಚಂದ್ರಾರೆಡ್ಡಿ ಕೈಲಿ ರಾಜಿನಾಮೆ ಕೊಡಿಸಿ ಗೆದ್ದು ತೋರಿಸಲಿ:ನಾಗರಾಜ್.

ಬಂಗಾರಪೇಟೆ:ಹೊಸರಾಯಪ್ಪನವರೇ ನಿಮಗೆ ತಾಕತ್ತಿದ್ದರೆ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಪುರಸಭೆ ಸದ್ಯಸರಾದ ಚಂದ್ರಾರೆಡ್ಡಿ ಅವರ ಕೈಯಲ್ಲಿ ರಾಜೀನಾಮೆ ಕೊಡಿಸಿ ಪುರಸಭೆ ಸದಸ್ಯರ ಚುನಾವಣೆಯಲ್ಲಿ ಗೆದ್ದು ತೋರಿಸಿ ಎಂದು ಬಹಿರಂಗವಾಗಿ ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ವಿ ನಾಗರಾಜ್ ಸವಾಲ್ ಹಾಕಿದರು. ಅವರು…

ಪರಿಸರ ಸಂರಕ್ಷಿಸಿಕೊಳ್ಳದಿದ್ದರೆ ಭೂಗರ್ಭದಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ – ವಿಜ್ಞಾನ ಲೇಖಕ ನಾಗೇಶ್ ಹೆಗಡೆ

ಭೂಮಿಯ ಉಷ್ಣಾಂಷ ೨ ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾದರೆ ಮನುಷ್ಯ ಭೂಗರ್ಭದಲ್ಲಿ ಬದುಕಬೇಕಾದ ಪರಿಸ್ಥಿತಿ ಬರಬಹುದು, ಈ ಕುರಿತು ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಪರಿಸರ ಜಾಗೃತಿ ಅರಿವು ಮೂಡಿಸಿ ಅನುಷ್ಠಾನಕ್ಕೆ ತರಬೇಕಾಗಿದೆಯೆಂದು ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಹೇಳಿದರು. ಕೋಲಾರ ನಗರದ ಪತ್ರಕರ್ತರ…

ಜಮೀನು ವಿಚಾರದಲ್ಲಿ ಇಬ್ಬರ ವ್ಯಕ್ತಿಗಳ ನಡುವೆ ಮಾರಾ ಮಾರಿ ಯುವಕ ಸಾವು.

ಶ್ರೀನಿವಾಸಪುರ:ಜಮೀನು ವಿಚಾರದಲ್ಲಿ ಮಾವು ಕೀಳುವ ವಿಚಾರಕ್ಕೆ ಗಲಾಟೆ ಇಬ್ಬರ ವ್ಯಕ್ತಿಗಳ ನಡುವೆ ಮಾರಾ ಮಾರಿಯಾಗಿ ಘಟನೆಯಲ್ಲಿ ಒಬ್ಬ ಯುವಕ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ನೀಲಟೂರು ಗ್ರಾಮದಲ್ಲಿ ನಡೆದಿದೆ. 3 ವರ್ಷಗಳಿಂದ ಕೋರ್ಟ್ ನಲ್ಲಿ ಜಮೀನು ವಿವಾದ ನಡೆಯುತ್ತಿತ್ತು ಎನ್ನಲಾಗಿದ್ದು,  ಮಾರಾ ಮಾರಿಯಲ್ಲಿ…

You missed

error: Content is protected !!