• Sat. May 4th, 2024

I.N.D.I.A: ಇಂಡಿಯಾ ಜೊತೆ ಮೈತ್ರಿ ಬಗ್ಗೆ ಪ್ರಕಾಶ್ ಅಂಬೇಡ್ಕರ್ ಹೇಳಿಕೆ. 

PLACE YOUR AD HERE AT LOWEST PRICE

ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ದಿಂದ ಮೈತ್ರಿಗಾಗಿ ತಮಗೆ ಆಹ್ವಾನ ಬಂದಿಲ್ಲ ಎಂದು ‘ವಂಚಿತ ಬಹುಜನ ಅಘಾಡಿ’ (ವಿಬಿಎ) ಸಂಸ್ಥಾಪಕ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ತಿಳಿಸಿದ್ಧಾರೆ.

ಪ್ರಕಾಶ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸಂಪರ್ಕಿಸಿದೆ ಎನ್ನುವ ವದಂತಿ ಹರಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಯಾವ ಪಾರಿವಾಳವೂ ಬಂದಿಲ್ಲ.. ಫೋನ್ ಕರೆಯೂ ಬಂದಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

‘ಇದು ಕಾಂಗ್ರೆಸ್‌ನ ಕಾರ್ಯಶೈಲಿ. ಮೈತ್ರಿಗಾಗಿ ಸಂಪರ್ಕಿಸದೆಯೂ ಮೈತ್ರಿ ಆಗಿದೆ ಎಂದು ಎಲ್ಲ ಕಡೆ ಹೇಳಿಕೊಂಡು ಬರುತ್ತಾರೆ’ ಎಂದು ಪ್ರಕಾಶ್ ಅಂಬೇಡ್ಕರ್ ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ, ಅಂಬೇಡ್ಕರ್ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮೈತ್ರಿಗಾಗಿ ಚರ್ಚೆ ನಡೆಸಿದ್ದರು. ಆದರೆ, ಅದು ಎರಡು ಪಕ್ಷಗಳಿಗೆ ಮಾತ್ರ ಸೀಮಿತವಾಗಿತ್ತು ಮತ್ತು ವಂಚಿತ್ ಬಹುಜನ್ ಅಘಾಡಿ ಇನ್ನೂ ಮಹಾರಾಷ್ಟ್ರದ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿಯ ಭಾಗವಾಗಿರಲಿಲ್ಲ.

ವಂಚಿತ್ ಬಹುಜನ್ ಅಘಾಡಿ ಇಲ್ಲದಿದ್ದರೆ ಅದು ಪರಿಪೂರ್ಣ ಬಿಜೆಪಿ ವಿರೋಧಿ ಮೈತ್ರಿ ಆಗಲು ಸಾಧ್ಯವಿಲ್ಲ ಎಂದು ವಿಬಿಎ ನಾಯಕತ್ವ ಹೇಳಿದೆ.

ಪ್ರಕಾಶ್ ಅಂಬೇಡ್ಕರ್ ವೃತ್ತಿಯಲ್ಲಿ ವಕೀಲರಾಗಿದ್ದು, ಅಕೋಲಾದಿಂದ ಎರಡು ಬಾರಿ ಲೋಕಸಭಾ ಸಂಸದ ಮತ್ತು ಒಂದು ಬಾರಿ ರಾಜ್ಯಸಭಾ ಸಂಸದರಾಗಿದ್ದಾರೆ. 2019 ರ ಲೋಕಸಭಾ ಚುನಾವಣೆಗೆ ಮುಂಚೆ ಅವರು ವಂಚಿತ್ ಬಹುಜನ್ ಅಘಾಡಿ  ಅನ್ನು ಸ್ಥಾಪಿಸಿದ್ದರು

Related Post

ಸರ್ಕಾರದಿಂದ ಪರೀಕ್ಷೆ ವೇಳೆಯಲ್ಲಿ ಹಿಂದೂ ಮಹಿಳೆಯರ ಮಾಂಗಲ್ಯ-ಕಾಲುಂಗುರ ತೆಗೆಸುವ ದುಸ್ಸಾಹಸ: ಡಾ.ವೇಣುಗೋಪಾಲ್ ಆಕ್ರೋಶ
ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ
ಐತಿಹಾಸಿಕ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಪಂಚರಾಜ್ಯಗಳ ಸಾಂಸ್ಕೃತಿಕ ಸಂಗಮಕ್ಕೆ  ಆದಿಮ ಸಜ್ಜು.

Leave a Reply

Your email address will not be published. Required fields are marked *

You missed

error: Content is protected !!