• Mon. Apr 29th, 2024

ಬಂಗಾರಪೇಟೆಯಲ್ಲಿ ರಸ್ತೆ ಸುರಕ್ಷತಾ ಸಪ್ತಹ.

PLACE YOUR AD HERE AT LOWEST PRICE

 

ಬಂಗಾರಪೇಟೆ ಪಟ್ಟಣದ ಅಕ್ಕಚ್ಚಮ್ಮ ಕಲ್ಯಾಣ ಮಂಟಪದಲ್ಲಿ ಕೆಜಿಎಫ್ ಜಿಲ್ಲಾ ಪೊಲೀಸ್ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣೆವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೋಲಿಸ್ ನಿರೀಕ್ಷಕರಾದ ಸಂಜೀವರಾಯಪ್ಪ ವಹಿಸಿ  ಮಾತನಾಡಿ ಆಟೋ ಚಾಲಕರು ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರನ್ನು ಗಳಿಸಬೇಕು  ಸಾರ್ವಜನಿಕರಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸಬೇಕೆಂದರು.

ನಮ್ಮ ಬಂಗಾರಪೇಟೆ ತಾಲೂಕಿನಲ್ಲಿ ಸುಮಾರು ಆಟೋಗಳು ಪ್ರತಿದಿನ ರಾತ್ರಿ ಹಗಲು ಚಾಲ್ತಿಯಲ್ಲಿ ನಡೆಯುತ್ತಿದೆ. ಆಟೋ ಚಾಲಕರು ಉತ್ತಮ ಸೇವೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ಸಹ ರಸ್ತೆಯ ನಿಯಮಗಳನ್ನು ಪಾಲಿಸಬೇಕು.

ಟ್ರಾಫಿಕ್ ರೂಲ್ಸ್ ಅನ್ನು ಪಾಲಿಸಬೇಕು. ಪ್ರತಿಯೊಬ್ಬರು ಚಾಚು ತಪ್ಪದೇ ಖಾಕಿ ಯೂನಿಫಾರಂ ಅನ್ನು ಧರಿಸಬೇಕು. ನಾವು ನೀವು ಒಂದೇ ಖಾಕಿ ಯೂನಿಫಾರಂ ಅನ್ನು ಹಾಕಿಕೊಳ್ಳುತ್ತೇವೆ. ಇಬ್ಬರು ಒಗ್ಗಟ್ಟಿನಿಂದ ಸೇವೆ ಸಲ್ಲಿಸಿದರೆ ಸಮಾಜಕ್ಕೆ ನಾವುಗಳು ದಾರಿದೀಪವಾಗುತ್ತೇವೆ.

ಸಾರ್ವಜನಿಕರ ಒಳಿತಿಗಾಗಿ ನಾವು ನೀವು 24 ಗಂಟೆಯೂ ಸಹ ಸೇವೆ ಸಲ್ಲಿಸುತ್ತಿದ್ದೇವೆ. ಯಾವುದೇ ವಿಚಾರದಲ್ಲೂ ನೀವು ಹಿಂಜರಿಯದೆ ನಮಗೆ ಮಾಹಿತಿಯನ್ನು ನೀಡಿ, ಬೇರೆ ಕಡೆಯಿಂದ ಹೊಸಬರು ಬಂದರೆ ಅವರ ಬಗ್ಗೆ ಒಂದು ನಿಗ ಇಡಿಬೇಕು.

ಆಕಸ್ಮಿಕವಾಗಿ ಅಪಘಾತಗಳು ನಡೆದರೆ ಸುಮ್ಮನೆ ನೋಡಿ ಇರಬೇಡಿ ಮೊದಲು ತಕ್ಷಣ ಹೋಗಿ ಸಹಾಯ ಮಾಡಿ ಆಸ್ಪತ್ರೆಗೆ ರವಾದಿಸಿ. ಪೊಲೀಸರು ಸದಾ ನಿಮ್ಮ ಪರವಾಗಿ ಇರುತ್ತಾರೆ. ಏಕೆಂದರೆ ಮಾನವೀಯತೆ ಬಹಳ ಮುಖ್ಯ ಎಂದರು.

ಆಟೋ ಚಾಲಕರು ದುಶ್ಚಟಗಳಿಗೆ ಬಲಿಯಾಗಬೇಡಿ ಉತ್ತಮ ಆಹಾರವನ್ನು ಸೇವಿಸಿ  ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು. ಪ್ರತಿಯೊಬ್ಬ ಆಟೋ ಚಾಲಕನು ಸಹ ಇನ್ಸೂರೆನ್ಸ್ ಅನ್ನು ಮಾಡಿಸಿಕೊಳ್ಳಿ.

ಆಗ ಯಾವ ಕೇಸು ನಿಮ್ಮ ಮೇಲೆ ಬೀಳುವುದಿಲ್ಲ. ಜೊತೆಗೆ ಆಕಸ್ಮಿಕವಾಗಿ ಅಪಘಾತದಲ್ಲಿ ಮೃತಪಟ್ಟರೆ ಸರ್ಕಾರದ ವತಿಯಿಂದ ಸುಮಾರು ಲಕ್ಷಗಳು ನಿಮಗೆ ನೆರವಾಗುತ್ತದೆ. ಆದ್ದರಿಂದ ಎಲ್ಲರೂ ಜೀವ ವಿಮೆ ಮಾಡಿಸಿ ಎಂದರು.

Related Post

ಸರ್ಕಾರದಿಂದ ಪರೀಕ್ಷೆ ವೇಳೆಯಲ್ಲಿ ಹಿಂದೂ ಮಹಿಳೆಯರ ಮಾಂಗಲ್ಯ-ಕಾಲುಂಗುರ ತೆಗೆಸುವ ದುಸ್ಸಾಹಸ: ಡಾ.ವೇಣುಗೋಪಾಲ್ ಆಕ್ರೋಶ
ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ
ಐತಿಹಾಸಿಕ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಪಂಚರಾಜ್ಯಗಳ ಸಾಂಸ್ಕೃತಿಕ ಸಂಗಮಕ್ಕೆ  ಆದಿಮ ಸಜ್ಜು.

Leave a Reply

Your email address will not be published. Required fields are marked *

You missed

error: Content is protected !!