• Tue. Apr 30th, 2024

ಬಂಗಾರಪೇಟೆ:ಜನಪರ ವೇದಿಕೆಯಿಂದ ಪ್ರತಿಭಟನೆ.

PLACE YOUR AD HERE AT LOWEST PRICE

ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಸಾಮರಸ್ಯಕ್ಕಾಗಿ ರಾಜ್ಯ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಯೋಜನೆಗಳ ಜಾರಿಗೊಳಿಸಲು ಪ್ರತಿಭಟಿಸಿ ತಹಸಿಲ್ದಾರ್ ದಯಾನಂದ್ ಅವರಿಗೆ ಮನೆ ಪತ್ರವನ್ನು ಸಲ್ಲಿಸಲಾಯಿತು.

ಈ ಪ್ರತಿಭಟನೆಯ ನೇತೃತ್ವವನ್ನು ಜನಪದ ವೇದಿಕೆ ತಾಲೂಕು ಸಂಚಾಲಕ ಪಿ. ಶ್ರೀನಿವಾಸ್ ಅವರು ವಹಿಸಿ ಮಾತನಾಡಿ, ಜಿಲ್ಲೆಗೆ ಹರಿಯುತ್ತಿರುವ ಕೆ.ಸಿ. ವ್ಯಾಲಿ ನೀರನ್ನು ಕಡ್ಡಾಯವಾಗಿ ಮೂರನೇ ಹಂತದ ಶುದ್ಧೀಕರಣ ಮಾಡಲೇಬೇಕು.

ಜಿಲ್ಲೆಯ ಕೆರೆ, ಕುಂಟೆ, ರಾಜ ಕಾಲುವೆಗಳನ್ನು ಚರುಗೊಳಿಸಿ ಅಭಿವೃದ್ಧಿಪಡಿಸಬೇಕು. ಆಸ್ಪತ್ರೆಯ ಉನ್ನತಿಕರಣ: ಜಿಲ್ಲೆಯಲ್ಲಿ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಫ್ರಿಕಾದೊಂದಿಗೆ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು.

ಎಲ್ಲಾ ತಾಲೂಕಿನ ಆಸ್ಪತ್ರೆಗಳನ್ನು ಉನ್ನತಿಕರಿಸಬೇಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಇಎಸ್ಐ ಆಸ್ಪತ್ರೆ ಮತ್ತು ಪ್ರತಿ ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕು.

ಕೃಷಿ ಆಧಾರಿತ ಕೈಗಾರಿಕೆಗಳು: ಜಿಲ್ಲೆಯ ಹಾಲು, ಹಣ್ಣು, ತರಕಾರಿ, ಕೋಳಿ, ಕುರಿ, ಇತ್ಯಾದಿ ಕ್ಷೇತ್ರಗಳಲ್ಲಿ ಕೆ.ಎಂ.ಎಫ್. ಮಾದರಿಯ ರೈತ ಉತ್ಪಾದಕರ ಸಹಕಾರಿ ಸಂಘಗಳ ರಚನೆ, ಸಹಕಾರಿ ಕೃಷಿ ಇದಕ್ಕೆ ಪೂರಕವಾದ ಕೃಷಿ ಆಧಾರಿತ ಸರ್ಕಾರಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು.

ಹೈನುಗಾರಿಕೆಯಂತ ಕೃಷಿ ಆರ್ಥಿಕತೆಯನ್ನು ನಾಶ ಮಾಡುವ ಬಡವರ ಆಹಾರದ ಹಕ್ಕನ್ನು ಬದುಕನ್ನು ಕಿತ್ತುಕೊಳ್ಳುತ್ತಿರುವ ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಬೇಕು. ಗ್ರಾಮೀಣ ಉದ್ಯೋಗ ಖಾತರಿಯ ಯೋಜನೆಯನ್ನು ಸಮರ್ಪಕವಾಗಿ ಜಾರಿ ಯಾಗಬೇಕು.

ಕೆಲಸದ ದಿನಗಳು 200 ಕೂಲಿ 700 ರೂ ಗೆ ಏರಿಸಬೇಕು. ನಗರ ಪ್ರದೇಶಗಳಿಗೂ ವಿಸ್ತರಣೆ ಆಗಬೇಕು. ಭೂಮಿ: ಬಗರ್ ಹು ಕ್ಕುಂ ಸಾಗುವಳಿ ಸಕ್ರಮವಾಗಬೇಕು. ರೈತರ ಹಿತಕ್ಕೆ ವಿರುದ್ಧವಾಗಿ ರಾಜ್ಯದ ಭೂಸ್ವಾಧೀನ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ರದ್ದು ಮಾಡಬೇಕು.

ಜಿಲ್ಲೆಯ ಭೂಹೀನರಿಗೆ ಭೂಮಿ ಮತ್ತು ನಿವೇಶನ ರೈತರಿಗೆ ನಿವೇಶನ ಹಂಚಿಕೆ ಮಾಡಬೇಕು. ಇತ್ತೀಚಿಗೆ ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ರದ್ದು ಮಾಡಬೇಕು. ಕೋಲಾರ ಎಪಿಎಂಸಿ ಜಿಲ್ಲೆಯ ಎಲ್ಲಾ ಮಾರುಕಟ್ಟೆಗಳಿಗೆ ಅಗತ್ಯವಿರುವ ಭೂಮಿ, ಅಗತ್ಯ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಒದಗಿಸಬೇಕು.

ಜಿಲ್ಲೆ ಎಲ್ಲಾ ತಾಲೂಕುಗಳಲ್ಲಿ ಅಭಿವೃದ್ಧಿಗಾಗಿ ರೈಲ್ವೆ ಸಂಪರ್ಕ ಮಾರ್ಗಗಳನ್ನು ವಿಸ್ತರಣೆ ಮಾಡಬೇಕ., ಹಾಗೂ ಈಗಾಗಲೇ ಮಂಜುರಾಗಿರುವ ರೈಲ್ವೆ ಮಾರ್ಗಗಳನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರಬೇಕು.

ತರಬೇಕು ಮತ್ತು ಜಿಲ್ಲೆಯ ಕೋಚ್ ಫ್ಯಾಕ್ಟರಿ ಮತ್ತು ವರ್ಕ್ ಶಾಪ್ ಪ್ರಾರಂಭಿಸಬೇಕು ರಸ್ತೆಯ ಅಗಲೀಕರಣ ಮತ್ತು ರಸ್ತೆಗಳನ್ನು ನಿರ್ಮಾಣ ಮಾಡಬೇಕು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಪ್ರಾರಂಭಿಸಬೇಕು.

ಜಿಲ್ಲೆಯ ಕೈಗಾರಿಕೆಗಳಲ್ಲಿ ಕಾರ್ಮಿಕ ಕಾನೂನುಗಳನ್ನು ಸಮರ್ಪಕವಾಗಿ ಜಾರಿಯಾಗಬೇಕು. ಕೋಲಾರ ಜಿಲ್ಲೆಯ ಹೆಮ್ಮೆಯ ಚಿನ್ನದ ಗಣಿ ಬಿಜಿಎಂಎಲ್ ಅನ್ನು ಪುನಃ ಚೇತನ ಗೊಳಿಸಬೇಕು. ಚಿನ್ನದ ಗಣಿ ಕಾರ್ಮಿಕರಿಗೆ ಕಾರ್ಮಿಕ ಕಾನೂನು ರೀತ್ಯ ಪರಿಹಾರ ಮತ್ತು ಕಾರ್ಮಿಕರಿಗೆ ವಾಸದ ಮನೆಗಳನ್ನು ನೀಡಬೇಕು.

ನಮ್ಮ ಜಿಲ್ಲೆಯ ಎಮ್ಮೆಯ ಬೆಂಬಲ ಆಸ್ತಿಕರಣ ಮಾಡಬಾರದು. ರಾಜ್ಯದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಜನರು ಇರುವ ಕೆ ಜಿ ಎಫ್ ತಾಲೂಕನ್ನು ಮಾದರಿ ತಾಲೂಕನ್ನಾಗಿ ಅಭಿವೃದ್ಧಿಪಡಿಸಲು ಎಸ್ಸಿಪಿ ಮತ್ತು ಟಿಎಸ್ ಪಿ ಹಣವನ್ನು ವರ್ಷಕ್ಕೆ 500 ಕೋಟಿ ರೂಗಳನ್ನು ಮೀಸಲಿಡಬೇಕು.

ಕ .ಸಿ. ರೆಡ್ಡಿ ಅವರ ಸ್ಮರಣೆಯಲ್ಲಿ ಅವರ ಗ್ರಾಮವಾದ ಕ್ಯಾಸಂಬಳ್ಳಿಯನ್ನು ಮಾದರಿ ಗ್ರಾಮವಾಗಿ ಅಭಿವೃದ್ಧಿ ಪಡಿಸುವುದು ಮತ್ತು ಗ್ರಾಮದ ಹತ್ತಿರ ಈಗಾಗಲೇ ಗುರುತಿಸಿರುವ 20 ಎಕರೆ ಭೂಮಿಯಲ್ಲಿ ಅರ್ಧಪೂರ್ಣ ಸ್ಮಾರಕವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ವಿಶೇಷ ಒತ್ತು ನೀಡಬೇಕು.

ದೇಶ ಮತ್ತು ರಾಜ್ಯಕ್ಕೆ ಹೈಬ್ರಿಡ್ ಹಸುಗಳನ್ನು ಪರಿಚಯಿಸಿದ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿರುವ ಎಂ.ವಿ. ಕೃಷ್ಣಪ್ಪನವರ ಸ್ಮರಣಾರ್ಥ ಜಿಲ್ಲೆಯಲ್ಲಿ ಹೈನುಗಾರಿಕೆ ವಿಜ್ಞಾನಗಳ ಕಾಲೇಜು ಅನ್ನು ಸ್ಥಾಪಿಸಬೇಕು. ಮಹಿಳಾ ಸಬಲೀಕರಣ: ಶ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡಬೇಕು. ಇವರು ತಯಾರಿಸಿರುವ ಪದಾರ್ಥಗಳನ್ನು ಮಾರಾಟ ಮಾಡಲು ಶ್ರೀ ಶಕ್ತಿ ಸ್ವಸಹಾಯ ಮಾಲ್  ಗಳನ್ನು ಪ್ರಾರಂಭಿಸಬೇಕು.

ಅಂತರಗಂಗೆ ಸೇರಿದಂತೆ ಜಿಲ್ಲೆಯಲ್ಲಿರುವ ಪ್ರವಾಸಿ ಸ್ಥಳಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಅಭಿವೃದ್ಧಿ ಪಡಿಸಬೇಕು. ಈಗಾಗಲೇ ಮಂಜೂರಾಗಿರುವ ಎಫ್.ಎಂ. ರೇಡಿಯೋ ಕೇಂದ್ರವನ್ನು ಕೂಡಲ ಆರಂಭಿಸಬೇಕು. ಜಿಲ್ಲೆಯಲ್ಲಿ ಪ್ರತಿಗ್ರಾಮಕ್ಕೊಂದು ಸ್ಮಶಾನಭೂಮಿಯನ್ನು ಕಾಯ್ದಿರಿಸಿ ನೀಡಬೇಕು. ಜಿಲ್ಲೆಯ ರೈತ ನಾಯಕರಾದ ಆರ್. ವೆಂಕಟರಾಮಯ್ಯ, ಪಿ. ವೆಂಕಟಗಿರಿಯಪ್ಪ, ನವರ ನೆನಪಿನಲ್ಲಿ ಶ್ರಮಿಕರ ಭವನ ನಿರ್ಮಿಸಿ ರೈತರು, ಕಾರ್ಮಿಕರ, ಸಾಮಾಜಿಕ, ರಾಜಕೀಯ, ಆರ್ಥಿಕ ,ಸಾಂಸ್ಕೃತಿಕ, ಅಧ್ಯಯನ ಕೇಂದ್ರ ನಿರ್ಮಿಸಬೇಕು.

ಈ ಕಾರ್ಯಕ್ರಮದಲ್ಲಿ ಕೆ. ಆರ್. ಆರ್. ಎಸ್. ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ತಾಲೂಕು ಸಹ ಸಂಚಾಲಕ ಬಿ.ಎಲ್.ಕೇಶವರಾಜ್, ತಾಲೂಕು ಸಹ ಸಂಚಾಲಕ ಹನುಮಂತರಾಯ, ಟಿ. ಅಪ್ಪಯ್ಯಣ್ಣ, ಡಿ. ಎಚ್. ಎಸ್. ತಾಲೂಕು ಮುಖಂಡ ಎ. ಪಿಚ್ಚ ಕಣ್ಣು, ತಾಲೂಕು ಕಾರ್ಮಿಕ ಮುಖಂಡ ಎಂ. ಮೋಹನ್, ತಾಲೂಕು ರೈತ ಮುಖಂಡ ಸಿ.ಆರ್. ಮೂರ್ತಿ, ತಾಲೂಕು ಕಾರ್ಮಿಕ ಮುಖಂಡ ಜಿ.ಪೆರುಮಲಪ್ಪ, ತಾಲೂಕು ಸಿಐಟಿಯು ಮುಖಂಡ ಆರ್. ರಘುಪತಿ, ತಾಲೂಕು ಕಟ್ಟಡ ಕಾರ್ಮಿಕ ಮುಖಂಡ ಸಿ.ಮುನುಸ್ವಾಮಿ, ಡಿ. ಎಚ್. ಎಸ್. ತಾಲೂಕು ಮುಖಂಡ ವೇಣುಗೋಪಾಲ್  ಭಾಗವಹಿಸಿದ್ದರು.

Related Post

ಸರ್ಕಾರದಿಂದ ಪರೀಕ್ಷೆ ವೇಳೆಯಲ್ಲಿ ಹಿಂದೂ ಮಹಿಳೆಯರ ಮಾಂಗಲ್ಯ-ಕಾಲುಂಗುರ ತೆಗೆಸುವ ದುಸ್ಸಾಹಸ: ಡಾ.ವೇಣುಗೋಪಾಲ್ ಆಕ್ರೋಶ
ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ
ಐತಿಹಾಸಿಕ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಪಂಚರಾಜ್ಯಗಳ ಸಾಂಸ್ಕೃತಿಕ ಸಂಗಮಕ್ಕೆ  ಆದಿಮ ಸಜ್ಜು.

Leave a Reply

Your email address will not be published. Required fields are marked *

You missed

error: Content is protected !!