• Fri. Apr 26th, 2024

PLACE YOUR AD HERE AT LOWEST PRICE

ಕುಸಿಯುತ್ತಿರುವ ಮೌಲ್ಯಾಧಾರಿತ ರಾಜಕಾರಣ:

ಹಿಂದಿನ ರಾಜಕಾರಣಿಗಳು ಜನಪರ ಚಳುವಳಿಗಳ ಮೂಲಕ ಹುಟ್ಟುತ್ತಿದ್ದರು. ಈಗ ಶ್ರೀಮಂತರು, ಆಡು ದಾರಿಯಲ್ಲಿ ಹಣ ಮಾಡಿಕೊಂಡವರು, ರಸ್ತೆ ಬದಿಯಲ್ಲಿ ಪ್ಲೇಕ್ಸ್ ಹಾಕುವ ಮೂಲಕ ರಾತ್ರೋರಾತ್ರಿ ಹುಟ್ಟಿಕೊಳ್ಳುತ್ತಿದ್ದಾರೆ. ಈಗಿನ ರಾಜಕಾರಣಿಗಳಿಗೂ ಹಿಂದಿನ ರಾಜಕಾರಣಿಗಳಿಗೂ ಬಹಳ ವ್ಯತ್ಯಾಸವಿದೆ. ಕೋಲಾರ ಜಿಲ್ಲೆಯವರೇ ಆದ ಪಿ ವೆಂಕಟಗಿರಿಯಪ್ಪ, ಟಿ ಚೆನ್ನಯ್ಯ, ನಾರಾಯಣ ಗೌಡ, ಆರ್ ವೆಂಕಟರಾಮಯ್ಯ, ಎಂ ವಿ ಕೃಷ್ಣಪ್ಪ, ಬೈರೇಗೌಡ ಇನ್ನು ಮೊದಲಾದವರು ತತ್ವ, ಸಿದ್ಧಾಂತಗಳ ಮೇಲೆ ರಾಜಕಾರಣ ಮಾಡುತ್ತಿದ್ದರು, ಅದರೆ ಈಗಿನ ಮಹಾನುಭಾವರು ತಾವು ಅಕ್ರಮವಾಗಿ ಮಾಡಿರುವ ಸಂಪತ್ತನ್ನು ಕಾಪಾಡಿಕೊಳ್ಳಲು ಮತ್ತು ಮತ್ತಷ್ಟು ಸಂಪತ್ತು ಮಾಡುವ ಕಡೆ ರಾಜಕಾರಣ ಮಾಡುತ್ತಿದ್ದಾರೆ.

ಮೌಲ್ಯಾಧಾರಿತ ರಾಜಕಾರಣ ಎಂಬುದು ಅಪಹಾಸ್ಯದ ವಸ್ತುವಾಗಿದೆ. ತತ್ವ, ಸಿದ್ಧಾಂತಗಳಿಗೆ ಮಾತ್ರ ಹಿಂದಿನ ರಾಜಕಾರಣಿಗಳು ಕಂಡು ವಿರೋಧಿಗಳಾಗಿದ್ದರು, ವಿಧಾನ ಸಭೆ, ಲೋಕಸಭೆಯಲ್ಲಿ ಚರ್ಚೆ ಸಮಯದಲ್ಲಿ ಒಬ್ಬರಿಗೊಬ್ಬರು ಗೌರವ ಕೊಡುತ್ತಿದ್ದರು. ಅದರೆ ಈಗಿನ ರಾಜಕಾರಣಿಗಳು ಹಾಡುವ ಭಾಷೆಗೂ ಬೀದಿ ಬದಿಯ ಪುಡಿ ರೌಡಿಗಳು ಹಾಡುವ ಭಾಷೆಗೂ ವ್ಯತ್ಯಾಸ ಕಾಣುತ್ತಿಲ್ಲ.

ಈಗ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಬರುತ್ತಿದೆ, ಜಿಲ್ಲೆಯ ನಾಗರೀಕರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಎಚ್ಚರ ತಪ್ಪದೇ, ಜಾತಿ, ಧರ್ಮಗಳನ್ನು ನೋಡದೆ, ಅಭಿವೃದ್ಧಿ ಮಾಡುವ ಅಭ್ಯರ್ಥಿಗಳನ್ನು ಗುರುತಿಸಿ ಆಯ್ಕೆ ಮಾಡವ ಕಡೆ ಗಮನವಿರಲಿ ಎನ್ನುವುದು ನನ್ನ ಅಭಿಲಾಷೆ.

ಅಬ್ಬಣಿ ಶಿವಪ್ಪ
ರಾಜ್ಯ ಪ್ರಧಾನ ಕಾರ್ಯದರ್ಶಿ
ಕರ್ನಾಟಕ ರಾಜ್ಯ ರೈತ ಸಂಘ
ಹಾಗೂ ಹಸಿರು ಸೇನೆ

Related Post

ಬೆಂಗಳೂರಿನ ಪುಸ್ತಕ ಮನೆ ಕೋಲಾರ ಜಿಲ್ಲೆಗೆ ಸ್ಥಳಾಂತರ : ಓದುಗ ಪ್ರಿಯರಿಗೆ ಸಂತೋಷದ ವಿಷಯ
ಆದಿಮದಲ್ಲಿ ಸಾಂಸ್ಕೃತಿಕ ಯಾನ -200ರ ಅದ್ದೂರಿ ಚಾಲನೆಗೆ ಕ್ಷಣಗಣನೆ .
ಮೂಲಭೂತ ಸೌಲಭ್ಯಗಳಿಲ್ಲದೆ ಹಂದಿಗೂಡಂತಾದ ಕಾಲೇಜು ಹಾಸ್ಟೆಲ್.

Leave a Reply

Your email address will not be published. Required fields are marked *

You missed

error: Content is protected !!