• Fri. May 3rd, 2024

ಸಾಮಾಜಿಕ ಬದಲಾವಣೆಗಾಗಿ ಭಿನಾಭಿಪ್ರಾಯಗಳನ್ನು ಬದಿಗೊತ್ತಿ ಎಡ-ಬಲ ಸಮುದಾಯಗಳು ಒಂದಾಗಬೇಕು : ಸೂಲಿಕುಂಟೆ ರಮೇಶ್ ಕರೆ

ByNAMMA SUDDI

Apr 6, 2023

PLACE YOUR AD HERE AT LOWEST PRICE

ಕರ್ನಾಟಕದ ಇತಿಹಾಸದ ಪುಟಗಳಲ್ಲಿ ವಿಶಿಷ್ಟ ಜಾಗೃತಿ ಮೂಡಿಸಿದ ದಲಿತ ಚಳುವಳಿಗೆ ಶ್ರಮಿಸಿದ ನಿರ್ಲಕ್ಷಿತ ಸಮುದಾಯಗಳ ಪೈಕಿ ಜೋಡೆತ್ತುಗಳಂತೆ ದುಡಿದ ಎಡ ಮತ್ತು ಬಲ ಸಮುದಾಯಗಳಾದ ಹೊಲೆಯ ಮಾದಿಗ ಸಮಾಜಗಳು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಚಳುವಳಿಯನ್ನು ತೆಗೆದುಕೊಂಡು ಹೋಗಬೇಕೆಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಕರೆ ನೀಡಿದರು.

ಬಂಗಾರಪೇಟೆ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಹಸಿರುಕ್ರಾಂತಿಯ ನಾಯಕ ಡಾ.ಬಾಬು ಜಗಜೀವನ್ ರಾಮ್ ರವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತೀಯ ಶೋಷಿತ ಸಮುದಾಯಗಳ ಚರಿತ್ರೆಯಲ್ಲಿ ಡಾ.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್‌ರವರು ಇಬ್ಬರೂ ಪ್ರಮುಖ ನಾಯಕರು. ಸಾಮಾಜಿಕ ಪರಿವರ್ತನೆಗಾಗಿ ಇವರಿಬ್ಬರ ಹೋರಾಟಗಳು ಭಿನ್ನವಾಗಿದ್ದರೂ ಗುರಿ ಒಂದೇ ಆಗಿತ್ತು ಈ ಸಮಾಜದ ತುಳಿತಕ್ಕೆ ಒಳಪಟ್ಟ ಸಮುದಾಯಗಳಿಗೆ ಇವರು ಆದರ್ಶವಾಗಿದ್ದು, ಅವರ ಮಾರ್ಗದರ್ಶನದಲ್ಲಿ ಭವಿಷ್ಯದ ಹೋರಾಟಗಳನ್ನು ಮುನ್ನಡೆಸಬೇಕಾಗಿದೆ ಎಂದರು.

ಕರ್ನಾಟಕ ದಲಿತ ಚಳುವಳಿಯಲ್ಲಿ ಎಡ-ಬಲ ಸಮುದಾಯಗಳು ಹೆಗಲಿಗೆ ಹೆಗಲು ಕೊಟ್ಟು ಸಾಮಾಜಿಕ ಸಮಾನತೆಗಾಗಿ ದುಡಿದ ಪ್ರಮುಖ ಸಮುದಾಯಗಳಾಗಿದವು. ಕಾರಣಾಂತರಗಳಿAದ ಎರಡು ದಶಕಗಳ ಕಾಲ ಪರಸ್ಪರ ಚರ್ಚೆಗೆ ಓಳಗಾಗಿದ್ದ ಪರಿಣಾಮ, ಶೋಷಣೆ ಮಾಡುವ ಪಟ್ಟಭದ್ರ ಶಕ್ತಿಗಳ ಅಟ್ಟಹಾಸ ತಾರಕಕ್ಕೇರಿದೆ. ಬದಲಾದ ಸನ್ನಿವೇಶದಲ್ಲಿ ಎಡ-ಬಲ ಸಮುದಾಯಗಳ ಭಿನ್ನಾಭಿಪ್ರಾಯಗಳಿಗೆ ಅನೇಕ ಚರ್ಚೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗಿದ್ದು, ಇನ್ನಾದರೂ ಎರಡೂ ಸಮುದಾಯಗಳು ಒಂದಾಗುವ ಮೂಲಕ ಚಳುವಳಿಯನ್ನು ಮುನ್ನಡೆಸುವ ಮೂಲಕ ಬಲಹೀನ ಇನ್ನಿತರೆ ಶೋಷಿತ ಸಮಾಜಗಳಿಗೆ ಧ್ವನಿಯಾಗಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಆಧಿನಾರಾಯಣ, ಜೀವಿಕ ರಾಮಚಂದ್ರಪ್ಪ, ಅನಿಗಾನಹಳ್ಳಿ ನಾರಾಯಣಸ್ವಾಮಿ, ಎಸ್.ಡಿ.ಮುನಿಸ್ವಾಮಿ, ಶಿವಕುಮಾರ್, ಸಿದ್ದನಹಳ್ಳಿ ನಾಗರಾಜ್ ಮತ್ತು ಗೌತಮ್ ರಮೇಶ್ ಉಪಸ್ತಿತರಿದ್ದರು.

Related Post

ಸರ್ಕಾರದಿಂದ ಪರೀಕ್ಷೆ ವೇಳೆಯಲ್ಲಿ ಹಿಂದೂ ಮಹಿಳೆಯರ ಮಾಂಗಲ್ಯ-ಕಾಲುಂಗುರ ತೆಗೆಸುವ ದುಸ್ಸಾಹಸ: ಡಾ.ವೇಣುಗೋಪಾಲ್ ಆಕ್ರೋಶ
ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ
ಐತಿಹಾಸಿಕ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಪಂಚರಾಜ್ಯಗಳ ಸಾಂಸ್ಕೃತಿಕ ಸಂಗಮಕ್ಕೆ  ಆದಿಮ ಸಜ್ಜು.

Leave a Reply

Your email address will not be published. Required fields are marked *

You missed

error: Content is protected !!