• Mon. May 13th, 2024

ದೇವರಾಯಸಮುದ್ರ ವ್ಯಾಪ್ತಿಯ ಭೂಹಗರಣ ಸಿಬಿಐಗೆ ಒಪ್ಪಿಸಿ: ರೈತ ಸಂಘ ಆಗ್ರಹ.

PLACE YOUR AD HERE AT LOWEST PRICE

ಕೋಲಾರ:ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರ ಕಂದಾಯ ವ್ಯಾಪ್ತಿಯ ಭೂ ಹಗರಣವನ್ನು ಸಿಬಿಐಗೆ ಒಪ್ಪಿಸಿ ಇದರಲ್ಲಿ ಶಾಮೀಲಾಗಿರುವ ಕಂದಾಯ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಲು ಒತ್ತಾಯಿಸಿ ಜೂ.೨೩ ರ ಶುಕ್ರವಾರ ರಾಷ್ಟೀಯ ಹೆದ್ದಾರಿ ದೇವರಾಯಸಮುದ್ರ ಗೇಟ್ ಬಂದ್ ಮಾಡಲು ಮುಳಬಾಗಿಲು ಪಟ್ಟಣದ ಕೆಇಬಿ ಆವರಣದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ  ಮಾತನಾಡಿ, ಲಕ್ಷ ಲಕ್ಷ ಸಂಬಳ ಪಡೆದು ಸರ್ಕಾರಿ ಆಸ್ತಿಗಳನ್ನು ಉಳಿಸಿ ಅಭಿವೃದ್ದಿ ಹಾಗೂ ಜಾನುವಾರುಗಳಿಗೆ ಮೀಸಲಿಡಬೇಕಾಗಿದ್ದರೂ, ಕಂದಾಯ ಸರ್ವೆ ಅಧಿಕಾರಿಗಳು ರಿಯಲ್‌ಎಸ್ಟೇಟ್ ಭೂಗಳ್ಳರ ಜೊತೆ ಶಾಮೀಲಾಗಿ ರಾತ್ರೋರಾತ್ರಿ ಕೆರೆ, ರಾಜಕಾಲುವೆ, ಗೋಮಾಳ ಗುಂಡುತೋಪು ಸರ್ಕಾರಿ ಆಸ್ತಿಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ದೂರಿದರು.

ರಾಷ್ಟಿಯ ಹೆದ್ದಾರಿ ಪಕ್ಕದಲ್ಲಿರುವ ದೇವರಾಯ ಸಮುದ್ರ ಕಂದಾಯ ವ್ಯಾಪ್ತಿಯ ತಮ್ಮೇಗೌಡನ ಕೆರೆ ಸೇರಿದಂತೆ ಜಮ್ಮುನಹಳ್ಳಿ ಸ.ನಂ. ೬ ರ ೧-೦೦ ಎಕರೆ ೧೦ ಗುಂಟೆ ಹುಲ್ಲು ಬನ್ನಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಬೃಂದಾವನ ಲೇಔಟ್ ಅಭಿವೃದ್ದಿ ಪಡಿಸಿರುವ ಲೇಔಟ್ ಮಾಲೀಕರ ಕೈಗೊಂಬೆಯಾಗಿ ಕಂದಾಯ ಅಧಿಕಾರಿಗಳು ಕೆಲಸ ನಿರ್ವಹಿಸುವ ಜೊತೆಗೆ ಒತ್ತುವರಿಯಾಗಿ ಸರ್ಕಾರಿ ಆಸ್ತಿಗಳ ಸಂಪೂರ್ಣ ದಾಖಲೆಗಳ ಸರ್ವೆನಂಬರ್‌ಗಳ ಸಮೇತ ದೂರು ನೀಡಿ ೩ ವರ್ಷ ಕಳೆದರೂ ಕನಿಷ್ಠ ಪಕ್ಷ ಒತ್ತುವರಿದಾರರಿಗೆ ನೋಟೀಸ್ ನೀಡಿಲ್ಲ ಎಂದು ಆರೋಪಿಸಿದರು.

ತಾಲ್ಲೂಕು ಕಚೇರಿಯ ದಾಖಲೆ ವಿಭಾಗದಲ್ಲಿ ಕೆಲಸ ಮಾಡುವ ಶ್ರೀನಿವಾಸ್ ಹಾಗೂ ಆವಣಿ ಹೋಬಳಿ ಕಂದಾಯ ರಾಜ್ಯಸ್ವ ನಿರೀಕ್ಷಕರಾದ ಸುಬ್ರಮಣಿ ಒಬ್ಬರ ಮೇಲೆ ಒಬ್ಬರು ಹೇಳಿಕೊಂಡು ನೋಟೀಸ್ ನೀಡದೆ ಒತ್ತುವರಿದಾರರ ಜೊತೆ ಶಾಮೀಲಾಗಿದ್ದಾರೆಂದು ಗಂಭೀರ ಆರೋಪ ಮಾಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‌ಪಾಷ ಮಾತನಾಡಿ, ಗ್ರಾಮೀಣ ಪ್ರದೇಶದ ಕುರಿಗಾಯಿಗಳಿಗೆ ಹಾಗೂ ಭೂಮಿ ಇಲ್ಲದ ಭೂ ರಹಿತ ಬಡವರಿಗೆ ಮಂಜೂರು ಮಾಡಲು ತಾಲ್ಲೂಕು ಆಡಳಿತದ ಬಳಿ ಸರ್ಕಾರಿ ಜಮೀನು ಸಿಗುವುದಿಲ್ಲ. ಆದರೆ ರಾತ್ರೋರಾತ್ರಿ ಬಡವರ ಮಂಜೂರಾತಿ ಅರ್ಜಿಯ ಹೆಸರಿನಲ್ಲಿ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ದಿಮೆಗಳಿಗೆ ಸರ್ಕಾರಿ ಕೆರೆ ಗೋಮಾಳ ಗುಂಡುತೋಪುಗಳನ್ನು ಮಂಜೂರು ಮಾಡುತ್ತಾರೆಂದು ಅವ್ಯವಸ್ಥೆ ವಿರುದ್ದ ಕಿರಿಕಾಡಿದರು.

೪೮ ಗಂಟೆಯಲ್ಲಿ ದೇವರಾಯ ಸಮುದ್ರ ಕಂದಾಯ ವ್ಯಾಪ್ತಿಯ ಭೂಹಗರಣವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡಸಿ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳದಿದ್ದಲ್ಲಿ ಜೂನ್ ೨೩ ರಂದು ರಾಷ್ಟಿçÃಯ ಹೆದ್ದಾರಿ ದೇವರಾಯಸಮುದ್ರ ಗೇಟ್ ಬಂದ್ ಮಾಡುವ ಮೂಲಕ ನ್ಯಾಯ ಪಡೆದುಕೊಳ್ಳುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು ಎಂದರು.

ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಕಾರ್ಯದರ್ಶಿ ಬಂಗಾರಿ ಮಂಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್, ಸುನಿಲ್‌ಕುಮಾರ್, ವಿಶ್ವ, ಶ್ರೀನಿವಾಸ್, ವಿಜಯ್‌ಪಾಲ್, ದೇವರಾಜ್, ಜುಬೇರ್‌ಪಾಷ, ಗುರುಮೂರ್ತಿ, ಭಾಸ್ಕರ್, ವೇಣು, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಹೆಬ್ಬಣಿ ಆನಂದರೆಡ್ಡಿ, ಯಾರಂಘಟ್ಟ ಗಿರೀಶ್, ಮಂಗಸAದ್ರ ತಿಮ್ಮಣ್ಣ, ಅಂಬ್ಲಿಕಲ್ ಮಂಜುನಾಥ ಮುಂತಾದವರು ಇದ್ದರು.

Related Post

ಸರ್ಕಾರದಿಂದ ಪರೀಕ್ಷೆ ವೇಳೆಯಲ್ಲಿ ಹಿಂದೂ ಮಹಿಳೆಯರ ಮಾಂಗಲ್ಯ-ಕಾಲುಂಗುರ ತೆಗೆಸುವ ದುಸ್ಸಾಹಸ: ಡಾ.ವೇಣುಗೋಪಾಲ್ ಆಕ್ರೋಶ
ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ
ಐತಿಹಾಸಿಕ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಪಂಚರಾಜ್ಯಗಳ ಸಾಂಸ್ಕೃತಿಕ ಸಂಗಮಕ್ಕೆ  ಆದಿಮ ಸಜ್ಜು.

Leave a Reply

Your email address will not be published. Required fields are marked *

You missed

error: Content is protected !!