• Sun. May 19th, 2024

Month: January 2024

  • Home
  • ಮುಳಬಾಗಿಲುನಲ್ಲಿ ಶ್ರೀರಾಮನ ಬ್ಯಾನರ್ ಹರಿದು ವಿಕೃತಿ.

ಮುಳಬಾಗಿಲುನಲ್ಲಿ ಶ್ರೀರಾಮನ ಬ್ಯಾನರ್ ಹರಿದು ವಿಕೃತಿ.

ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಗುಣಿಗುಂಟೆಪಾಳ್ಯ ಸರ್ಕಲ್ ನಲ್ಲಿ ಶ್ರೀರಾಮನ ಬ್ಯಾನರ್ ಹರಿದು ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಸಂಕ್ರಾಂತಿ ಹಬ್ಬ ಹಾಗು ಅಯೋಧ್ಯೆ ಶ್ರೀರಾಮನ ಪ್ರತಿಷ್ಟಾಪನೆ ಕಾರ್ಯಕ್ರಮಕ್ಕೆ ಶುಭಕೋರಿ ಹಾಕಲಾಗಿದ್ದ ಗುಣಿಗುಂಟಿಪಾಳ್ಯ ಯುವಕರು ಹಾಕಿದ್ದ  ಬ್ಯಾನರ್ ಹರಿಯಾಲಾಗಿದೆ. ನೆನ್ನೆ ರಾತ್ರಿ…

SC,ST ಹಾಸ್ಟೆಲ್ ಗಳಲ್ಲಿ ವಾರ್ಡನ್ಗಳ ಕೊರತೆ:ವರದಿಗೆ ಹೈಕೋರ್ಟ್ ಸೂಚನೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳ ಸರಕಾರಿ ವಸತಿ ನಿಲಯಗಳಲ್ಲಿನ ವಾರ್ಡನ್ ಮತ್ತು ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು…

ಡೂಂ ಲೈಟ್ ಸರ್ಕಲ್ ನಲ್ಲಿ ಕಾಫಿ ಕುಡಿಯುತ್ತಾ ಪತ್ರಿಕೆ ಓದುತ್ತಿದ್ದರೆ

-ವಕ್ಕಲೇರಿ ರಾಜಪ್ಪ. ಛೇ ಬೆಳಿಗ್ಗೆ ಮಗಳನ್ನು ಕಾಲೇಜ್ ಬಸ್ಸು ಹತ್ತಿಸಿ ಡೂಂ ಲೈಟ್ ಸರ್ಕಲ್ ನಲ್ಲಿ ಕಾಫಿ ಕುಡಿಯುತ್ತಾ ಪತ್ರಿಕೆ ಓದುತ್ತಿದ್ದರೆ ಆಕ್ಷರಗಳು ಓದುತ್ತಿದ್ದೇನೆ. ತಲೆಯಲ್ಲಿನ ವಿಷಯ ಮಾತ್ರ ರಾತ್ರಿನಡೆದ ಘಟನೆಯೇ ತುಂಬಿಕೊಂಡಿದೆ. ಮಣಿಪಾಲ್ ಆಸ್ವತ್ತೆಯಿಂದ ಕೋಲಾರ ಕಡೆಗೆ ಸ್ವಲ್ಪ ದೂರ…

ಕ್ಯಾಸಂಬಳ್ಳಿ ಗ್ರಾಪಂನಲ್ಲಿ ಇಸ್ವತ್ತು ಪ್ರತಿಯ ಮರು ಮುದ್ರಣಕ್ಕೆ 1 ಸಾವಿರ ಲಂಚ.

ಕೆಜಿಎಫ್:ಇಸ್ವತ್ತು ಮರು ಮುದ್ರಣ ಪ್ರತಿಗೆ ಕಛೇರಿಯಲ್ಲೇ 1ಸಾವಿರದ 200ರೂ ಲಂಚ ಸ್ವೀಕರಿಸಿರುವ ಘಟನೆ ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ನಡೆದಿದೆ. ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ನಾಗಲೇಪಲ್ಲಿಯ ನಾರಾಯಣಮ್ಮ  ರವರ ಮನೆಯ ಇಸ್ವತ್ತು ಪ್ರತಿಯ ಮರು ಮುದ್ರಣಕ್ಕೆ ನಾರಾಯಣಮ್ಮರ ಮಗ…

ಸಮಯಕ್ಕೆ ಬಾರದ ಸಾರಿಗೆ ಬಸ್:ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು.

ಬಂಗಾರಪೇಟೆ: ಸಮಯಕ್ಕೆ ಸೂಕ್ತ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಟ್ಟಣದ ಬಸ್ ನಿಲ್ದಾಣದ ಬಳಿ ಸುಮಾರು ಅರ್ಧ ಘಂಟೆಗೂ ಹೆಚ್ಚು ಸಮಯ ಸಾರಿಗೆ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಈ ವೇಳೆ ವಿಧ್ಯಾರ್ಥಿಗಳು ಮಾತನಾಡಿ,…

ಮಾದಕ ವಸ್ತುಗಳ ವಿರುದ್ದ ಬೃಹತ್ ಜಾಗೃತಿ ಜಾಥಾ.

ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವತಿಯಿಂದ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ವಾಕ್ ಅಂಡ್ ರನ್ ಎಂಬ ಘೋಷವಾಕ್ಯದೊಂದಿಗೆ ಬೃಹತ್ ಜಾಗೃತಿ ಜಾಥಾ ಕಾರ್ಯಕ್ರಮ ಸೋಮವಾರದಂದು ಕೆಜಿಎಫ್ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೆ.ಜಿ.ಎಫ್ ನಗರಸಭೆ ಮೈದಾನದಿಂದ ಪ್ರಾರಂಭಗೊಂಡ ಜಾಗೃತಿ ಜಾಥಾ ಕಾರ್ಯಕ್ರಮವನ್ನು…

ಮಾಲೂರು ಶಾಸಕ ಕೆ.ವೈ.ನಂಜೇಗೌಡ  ಮನೆ ಮೇಲೆ ಇಡಿ ದಾಳಿ.

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ನಂಜೇಗೌಡರ ಮಾಲೂರು ತಾಲ್ಲೂಕು ಕೊಮ್ಮನಹಳ್ಳಿಯಲ್ಲಿರುವ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ. ಜಿತೆಗೆ ಕೋಲಾರ  ತಾಲ್ಲೂಕು ಹುತ್ತೂರು ಹೋಬಳಿಯಲ್ಲಿರುವ ಕೋಚಿಮುಲ್ ಕಚೇರಿಯಲ್ಲಿಯೂ  ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಕೊಮ್ಮನಹಳ್ಳಿ ನಂಜುಂಡೇಶ್ವರ…

ಟಿಎಪಿಸಿಎಂಎಸ್ ಚುನಾವಣೆ, ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿಗಳ ಪ್ರಚಾರ ಪ್ರಾರಂಭ.

ಕೋಲಾರ: ತಾಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ನ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳು ಮುಖಂಡರ ನೇತೃತ್ವದಲ್ಲಿ ಚುನಾವಣಾ ಪ್ರಚಾರಕ್ಕೆ ಶುಕ್ರವಾರ ನಗರದ ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು.   ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್…

ಅಧಿಕಾರಿಗಳಿಂದ ವಾಹನ ದುರುಪಯೋಗ:ಜಿಲ್ಲಾಧಿಕಾರಿಗಳು ಕ್ರಮ ಜರುಗಿಸುವರೆ?.

ಕೆ.ರಾಮಮೂರ್ತಿ. ಬಂಗಾರಪೇಟೆ:ಕೋಲಾರ, ಕೆಜಿಎಫ್ ಮತ್ತು ಬಂಗಾರಪೇಟೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಪ್ರತಿದಿನ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಮಾಡುತ್ತಾ ಬಂಗಾರಪೇಟೆ ರೈಲ್ವೆ ನಿಲ್ದಾಣದ ಬಳಿಗೆ ಸರ್ಕಾರಿ ವಾಹನ ಕರೆಸಿಕೊಂಡು ಕಛೇರಿಗೆ ತೆರಳುವ ಮೂಲಕ ಸರ್ಕಾರಿ ವಾಹನ ದುರುಪಯೋಗಪಡಿಸಿಕೊಳ್ಳುತ್ತಿದ್ದರೂ ಜಿಲ್ಲಾಧಿಕಾರಿಗಳು ಅಥವಾ ಮೇಲಧಿಕಾರಿಗಳು ಕ್ರಮ…

ಕದ್ದ ಕೋಳಿ ಖರೀದಿಸಿದ್ದನ್ನು ಪ್ರಶ್ನಿಸಿದವನ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನ.

ಕೋಲಾರ:ಕದ್ದ ಕೋಳಿ ಖರೀದಿಸಿದ್ದನ್ನು ಪ್ರಶ್ನಿಸಿದವನ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರದ ಅಮ್ಮಾವರಪೇಟೆ ವೃತ್ತದಲ್ಲಿ ಕಳ್ಳತನ ಮಾಡಿದ ಕೋಳಿಗಳನ್ನು ಖರೀದಿಸುವ ಆಸಾಮಿಯನ್ನು ಗುರುತು ಪತ್ತೆ ಮಾಡಿ ಪ್ರಶ್ನಿಸಿದ ಖಾಸಗಿ ವಾಹಿನಿಯ ಕ್ಯಾಮರಾ ಮೆನ್ ಕಿರಣ್ ಮೇಲೆ ಮಚ್ಚಿನಿಂದ…

You missed

error: Content is protected !!